ಅನುಸೂಚಿಗಳು (Schedules).
ಅನುಸೂಚಿಗಳು (Schedules). ಇವು ಸಂವಿಧಾನದ ವಿಧಿಗಳಲ್ಲಿ ವಿವರಿಸದ ಹೆಚ್ಚಿನ ಮಾಹಿತಿ ಅಥವಾ ಪಟ್ಟಿಗಳನ್ನು ಒಳಗೊಂಡಿವೆ. ಪ್ರಸ್ತುತ ಭಾರತೀಯ ಸಂವಿಧಾನದಲ್ಲಿ 12 ಅನುಸೂಚಿಗಳು ಇವೆ:
ಮೊದಲನೇ ಅನುಸೂಚಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಸರು ಮತ್ತು ಅವುಗಳ ವ್ಯಾಪ್ತಿ.
ಎರಡನೇ ಅನುಸೂಚಿ: ರಾಷ್ಟ್ರಪತಿ, ರಾಜ್ಯಪಾಲರು, ನ್ಯಾಯಾಧೀಶರು ಮತ್ತು ಸಿ.ಎ.ಜಿ ಅವರ ವೇತನ ಮತ್ತು ಭತ್ಯೆಗಳು.
ಮೂರನೇ ಅನುಸೂಚಿ: ಪ್ರಮಾಣ ವಚನಗಳ ನಮೂನೆಗಳು.
ನಾಲ್ಕನೇ ಅನುಸೂಚಿ: ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಾನಗಳ ಹಂಚಿಕೆ.
ಐದನೇ ಅನುಸೂಚಿ: ಅನುಸೂಚಿತ ಪ್ರದೇಶಗಳು ಮತ್ತು ಬುಡಕಟ್ಟು ಪಂಗಡಗಳ ಆಡಳಿತ ಮತ್ತು ನಿಯಂತ್ರಣ.
ಆರನೇ ಅನುಸೂಚಿ: ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಆಡಳಿತ.
ಏಳನೇ ಅನುಸೂಚಿ: ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ (ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ).
ಎಂಟನೇ ಅನುಸೂಚಿ: ಸಂವಿಧಾನ ಅಂಗೀಕರಿಸಿದ 22 ಅಧಿಕೃತ ಭಾಷೆಗಳು (ಕನ್ನಡವೂ ಸೇರಿದಂತೆ).
ಒಂಬತ್ತನೇ ಅನುಸೂಚಿ: ಭೂ ಸುಧಾರಣೆ ಮತ್ತು ಕೆಲವು ಕಾಯ್ದೆಗಳ ರಕ್ಷಣೆ.
ಹತ್ತನೇ ಅನುಸೂಚಿ: ಪಕ್ಷಾಂತರ ವಿರೋಧಿ ಕಾಯ್ದೆ (Anti-defection law).
ಹನ್ನೊಂದನೇ ಅನುಸೂಚಿ: ಪಂಚಾಯತ್ ರಾಜ್ ಸಂಸ್ಥೆಗಳ ಅಧಿಕಾರ ಮತ್ತು ಜವಾಬ್ದಾರಿಗಳು (29 ವಿಷಯಗಳು).
ಹನ್ನೆರಡನೇ ಅನುಸೂಚಿ: ನಗರಪಾಲಿಕೆಗಳ (Municipalities) ಅಧಿಕಾರ ಮತ್ತು ಜವಾಬ್ದಾರಿಗಳು (18 ವಿಷಯಗಳು).
Comments
Post a Comment